ಮೊಹಮ್ಮದ್ ನಲಪಾಡ್‌ಗೆ ಬೆನ್ನುಬೆನ್ನಿಗೆ ಸಂಕಷ್ಟ! SIT ಚಾರ್ಜ್‌ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್
ಬೆಂಗಳೂರು, ಜೂನ್ 9: ಬಿಟ್ ಕಾಯಿನ್ ಬಹುಕೋಟಿ ರೂಪಾಯಿ ಹಗರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ದಾಖಲಿಸಿದೆ. ಈ ಚಾರ್ಜ್ ಶೀಟ್‌ನಲ್ಲಿ ನಲಪಾಡ್, ಶ್ರೀಕಿ ಮತ್ತು ರಾಬಿನ್ ಸೇರಿದಂತೆ ಕೆಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಿಟ್ ಕಾಯಿನ್ ನಗದೀಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಹಣ ಪಡೆದಿದ್ದಾರೆ ಮತ್ತು ಕಮಿಷನ್ ಪಡೆದಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಹ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ನಲಪಾಡ್‌ಗೆ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಎರಡು ಬಾರಿ ಇಡಿ ವಿಚಾರಣೆಗೆ ನಲಪಾಡ್ ಹಾಜರಾಗಿರಲಿಲ್ಲ. ಸರ್ಕಾರ ರಚನೆಯ ನೆಪವೊಡ್ಡಿ ಗೈರಾಗಿದ್ದರು. ಈಗ ಮೂರನೇ ಬಾರಿಗೆ ಸಮನ್ಸ್ ಜಾರಿಯಾಗಿದ್ದು, ಈ ಬಾರಿ ಹಾಜರಾಗದಿದ್ದರೆ ನಲಪಾಡ್‌ಗೆ ಸಂಕಷ್ಟ ಎದುರಾಗಲಿದೆ. ಮನೆ ಮೇಲೆ ದಾಳಿ ನಡೆಸಲಾಗಿದೆ .ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಲಪಾಡ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.ಮೂರನೇ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ . ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಈಗಾಗಲೇ ನಲಪಾಡ್ ಅವರನ್ನು ಎರಡು ಬಾರಿ ವಿಚಾರಣೆ ಮಾಡಿದೆ. ಇದೀಗ ಎಸ್‌ಐಟಿ ಚಾರ್ಜ್‌ಶೀಟ್ ಬೆನ್ನಲ್ಲೇ ಮೂರನೇ ಬಾರಿ ಸಮನ್ಸ್ ನೀಡಿ ವಿಚಾರಣೆಗೆ ಕರೆಯಲು ಇಡಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ