ಸಂಡೂರು ರಾಜವಂಶಕ್ಕೆ ಸೇರಿದ ಕಾರ್ತಿಕೇಯ ಘೋರ್ಪಡೆ ನಿಧನ
ಜಿಲ್ಲೆಯ ಸಂಡೂರು ರಾಜವಂಶಕ್ಕೆ ಸೇರಿದ ಕಾರ್ತಿಕೇಯ ಘೋರ್ಪಡೆ ಅವರು ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.ಕಾರ್ತಿಕೇಯ ಘೋರ್ಪಡೆ ಅವರು ಸಂಡೂರು ಸಂಸ್ಥಾನದ ರಾಜ ಹಾಗೂ ಮಾಜಿ ಸಚಿವ ಎಮ್, ವೈ, ಘೋರ್ಪಡೆ ಅವರ ಪುತ್ರರಾಗಿದ್ದರು. ರಾಜಕೀಯ ಕ್ಷೇತ್ರದಲ್ಲೂ ಅವರು ಗುರುತಿಸಿಕೊಂಡಿದ್ದರು.ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಕಾರ್ತಿಕೇಯ ಘೋರ್ಪಡೆ ಅವರ ಸಾಕಷ್ಟು ಪ್ರಭಾವ ಇತ್ತು. ಪಕ್ಷದ ಹಲವು ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇಂದು ಸಂಜೆ ಸಂಡೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.