ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ
ಬಾಗಲಕೋಟೆ : ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿಯ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ನಡೆದಿದೆ.ಕಾರಣವೇನೆಂಬುದು ತಿಳಿದು ಬಂದಿಲ್ಲಾ . ಪವಿತ್ರಾ ಒಂಟಿ (19), ಕಾರ್ತಿಕ್ ನಾಯಕ್(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪವಿತ್ರಾ ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿಯಾಗಿದ್ದಳು. ಕಾರ್ತಿಕ್ ಅಸ್ಕಿ ಅದೇ ಗ್ರಾಮದ ಹುಡುಗ. ಮಂಗಳವಾರ ಮನೆಯಲ್ಲಿ ಇವರಿಬ್ಬರ ಮದುವೆ ವಿಷಯವಾಗಿ ಗಲಾಟೆ ನಡೆದಿದೆ . ಬಳಿಕ ಇವರಿಬ್ಬರು 3 ವರ್ಷದಿಂದ ಪ್ರೀತಿಸಿರುವ ವಿಷಯ ತಳಿದು ಮನೆಯವರು ಮದುವೆಗೆ ಒಪ್ಪಿದ್ದರು . ಇವರಿಬ್ಬರ ಮಧ್ಯೆ ವೈಮನಸ್ಸಿನಿಂದ ಜಗಳ ನಡೆದಿರಬಹವುದೆಂದು ತಿಳಿದುಬಂದಿದೆ . ಇದಾದ ಬಳಿಕ ಮನನೊಂದ ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಸುದ್ದಿ ಕೇಳಿದ ನಂತರ ಮನನೊಂದು ಪ್ರಿಯಕರ ಕಾರ್ತಿಕ್ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತರೆ ಸುದ್ದಿಗಳು