ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

  ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !
ವರದಿಗಾರರು : shobha jagadish | ಸ್ಥಳ : Bengaluru | ದಿನಾಂಕ : 07-04-2026

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

ಬೆಂಗಳೂರು : ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ . ಬೆಂಗಳೂರು ಮೂಲದ ಮಹಿಳೆಯು ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದು, ಶೋಷಣೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವವಹಿಸಿಕೊಂಡಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು ಮಾಡಿದ್ದಾರೆ.ಮಹಿಳೆ ಮೂಲತಃ ಬೆಂಗಳೂರಿನವರಾಗಿದ್ದು, ಸ್ವತಃ ಸ್ವಾಮೀಜಿ ನನ್ನ ಖಾಸಗಿ ವಿಡಿಯೋ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಸ್ವಾಮೀಜಿಯದ್ದು ಎನ್ನಲಾದ ಖಾಸಗಿ ವಿಡಿಯೋ ಇತ್ತೀಚೆಗೆ ಹರಿದಾಡಿದ್ದು, ಸದ್ಯ ಮಹಿಳೆಯ ದೂರಿನ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರು ನಿವಾಸಿಯಾಗಿರುವ ನಾನು, ಲಿಂಗಾಯತ ಸಮಾಜಕ್ಕೆ ಸೇರಿದವಳಾಗಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧಿಪತಿಗಳು, ಮಹಾಪೀಠ ಕೂಡಲ ಸಂಗಮ, ಇವರ ಭಕ್ತಳಾಗಿದ್ದು, ಬೆಂಗಳೂರಿಗೆ ಬಂದಾಗ ಹಲವು ಬಾರಿ ಭೇಟಿಯಾಗಿ ಮಾತನಾಡಿ ಅವರ ಹೋರಾಟಗಳ ಬಗ್ಗೆ ಬೆಂಬಲವನ್ನು ಸಹ ನೀಡಿದ್ದನು. ಹೀಗೆ ಪರಿಚಯವಾಗಿದ್ದ ಸ್ವಾಮೀಜಿಯವರು ಅವರು ನನ್ನನ್ನು ಮಠಕ್ಕೆ ಕರೆಸಿ 'ಪ್ರಸಾದ ಕೊಡುತ್ತೇನೆ' ಎಂದು ಹೇಳಿ ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ಮಾತನಾಡುತ್ತಾ ಅಸಭ್ಯವಾದ ಪದಗಳನ್ನು ಬಳಸಿ, ಮೈ ಕೈಯನ್ನು ಮುಟ್ಟುತ್ತ ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದ್ದು, ಆ ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೆ ನನ್ನ ಮೇಲೆ ಅವರು ನಡೆಸಿರುವ ಲೈಂಗಿಕ ದೌರ್ಜನ್ಯದ ಖಾಸಗಿ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಬಳಸಿ ಅವರು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು, ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೆನೆ ' ಎಂದು ಬೆದರಿಸುತ್ತಿದ್ದಾರೆ. ಈ ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗುತ್ತಿದೆ " ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 375+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 3425+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 3466+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 3523+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 3625+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 3673+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 3705+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 3749+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 3797+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 3810+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 3884+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 3944+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6165+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6227+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6278+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 6333+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 6495+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 6523+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 6653+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 6834+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9037+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9202+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9263+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 9435+