ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಗಂಗಾವತಿ ಪಟುಗಳ ಕ್ರೀಡಾ ಕಾವ್ಯ : ಬೇತಲ್ ಪ.ಪೂ. ಕಾಲೇಜಿನ ಚಿನ್ನದ ಪದ್ಯ”
ವರದಿಗಾರರು : ಬಸವರಾಜ್, | ಸ್ಥಳ : ಕೊಪ್ಪಳ | ದಿನಾಂಕ : 18-09-2025

ಗಂಗಾವತಿ ಪಟುಗಳ ಕ್ರೀಡಾ ಕಾವ್ಯ : ಬೇತಲ್ ಪ.ಪೂ. ಕಾಲೇಜಿನ ಚಿನ್ನದ ಪದ್ಯ”

100 ಪದಕಗಳ ದಿಗ್ಗಜ ಸಾಧನೆ : 10 ಕ್ರೀಡಾಪಟುಗಳ ತ್ರಿವಿಜಯ :: 30 ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಲಗ್ಗೆ ಗಂಗಾವತಿ:-ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆಶ್ರಯದಲ್ಲಿ ಹಾಗೂ ಶ್ರೀ ಎಚ್.ಆರ್. ಸರೋಜಮ್ಮ ಬಾಲಕಿಯರ ಪ.ಪೂ. ಕಾಲೇಜಿನ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಗಂಗಾವತಿಯ ಬೇತಲ್ ಸ್ವತಂತ್ರ ಪ.ಪೂ. ಕಾಲೇಜು ತನ್ನ ಅದ್ಭುತ ಸಾಧನೆಯಿಂದ ಎಲ್ಲರ ಗಮನ ಸೆಳೆದಿದೆ. ಒಟ್ಟಾರೆ 68 ಚಿನ್ನದ ಪದಕಗಳು ಹಾಗೂ 32 ಬೆಳ್ಳಿಯ ಪದಕಗಳನ್ನು ಕಲೆಹಾಕಿದ ಈ ಕಾಲೇಜು, ಜಿಲ್ಲೆಯ ಕ್ರೀಡಾಂಗಣದಲ್ಲಿ ತನ್ನ ಪ್ರಭಾವ ಬೀರಿದೆ. ವಿಶೇಷವಾಗಿ ಹತ್ತು ಮಂದಿ ವಿದ್ಯಾರ್ಥಿಗಳು ಒಂದೇ ವೇಳೆ ಮೂರು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ಅಪರೂಪದ ಸಾಧನೆ ಮಾಡಿದ್ದು, ಈ ಮೂಲಕ ಕಾಲೇಜಿನ ಕೀರ್ತಿಗೆ ಹೊಸ ಮೆರುಗು ತಂದಿದ್ದಾರೆ.

ಕರಾಟೆ, ಕುಸ್ತಿ, ಜೂಡೋ, ಬಾಕ್ಸಿಂಗ್, ಟೆಕ್ವಾಂಡೋ, ಬೆಲ್ಟ್ ಕುಸ್ತಿ ಮತ್ತು ಈಜು ಕ್ರೀಡೆಗಳಲ್ಲಿ ಕಾಲೇಜಿನ ಕ್ರೀಡಾಪಟುಗಳು ಮಿಂಚಿ, 30 ಮಂದಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಲ್ಲಿ ಕಾವ್ಯ, ಶಂಶಾದ್ ಬೇಗಂ, ಸಂಜನಾ, ದ್ರಾಕ್ಷಾಯಿಣಿ, ಅಮೂಲ್ಯ, ರಂಜಿತಾ, ರೆಹಮಾನ್ ಬೀ, ಅಂಜನಾ, ಚೈತನ್ಯ, ಚಂದ್ರಿಕಾ, ಚೈತ್ರಾ, ಸಹನಾ, ಅಪೂರ್ವ, ತೇಜಸ್ವಿನಿ, ಆಫೀಜಾ, ಶ್ರವಣ್ ಕುಮಾರ್, ಸೂರ್ಯ, ಜಶ್ವಂತ್, ಚಂದ್ರಶೇಖರ್, ವಸಂತ್, ಪಾಮೇಶ್, ತುಳಸ್ ನಾಯ್ಕ್, ದುರ್ಗೇಶ್, ರಮೇಶ್ ಶಿವಾಜಿ, ಸಂಜಯ್, ವೈಭವ್, ಶರಣಬಸವ, ಮುಖೇಶ್ ಮುಂತಾದವರು ಸೇರಿದ್ದಾರೆ.

ಅಧ್ಯಕ್ಷ ರಾಜು ಸುಧಾಕರ್ ಅವರು, “ನಮ್ಮ ಕಾಲೇಜು ಕ್ರೀಡೆ ಕ್ಷೇತ್ರದಲ್ಲಿ ಇಂತಹ ದಿಗ್ಗಜ ಸಾಧನೆ ಮಾಡಿರುವುದು ಹೆಮ್ಮೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಹಾಗೂ ತರಬೇತುದಾರರ ಸಮರ್ಪಣೆಗೆ ಈ ಯಶಸ್ಸು ಸಾಕ್ಷಿ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರಮಟ್ಟ, ಅಂತರಾಷ್ಟ್ರಮಟ್ಟದ ವಿಜೇತರನ್ನು ನಮ್ಮ ಸಂಸ್ಥೆಯಿಂದ ತರಬೇಕೆಂಬುದು ನಮ್ಮ ಆಶಯ” ಎಂದು ಹರ್ಷ ವ್ಯಕ್ತಪಡಿಸಿದರು, ಮುಖ್ಯ ತರಬೇತುದಾರ ಬಾಬುಸಾಬ್ ತಮ್ಮ ಭಾವನೆ ವ್ಯಕ್ತಪಡಿಸುತ್ತಾ, “ವಿದ್ಯಾರ್ಥಿಗಳು ಪ್ರತಿದಿನ ಶ್ರಮಪಟ್ಟು ಅಭ್ಯಾಸ ಮಾಡಿದ ಪರಿಣಾಮವೇ ಇಂತಹ ಮಹತ್ವದ ಸಾಧನೆ ಸಾಧ್ಯವಾಗಿದೆ. ಪ್ರತಿ ಕ್ರೀಡಾಪಟುವಿನಲ್ಲೂ ಉತ್ಸಾಹ, ದೃಢನಿಶ್ಚಯ ಹಾಗೂ ಗೆಲುವಿನ ಹಂಬಲ ತುಂಬಿಕೊಂಡಿದೆ. ರಾಜ್ಯಮಟ್ಟದಲ್ಲಿಯೂ ಇದೇ ತೀವ್ರತೆಗೆ ತರಬೇತಿ ಪಡೆದು ಇನ್ನಷ್ಟು ಕೀರ್ತಿ ತರುವ ವಿಶ್ವಾಸವಿದೆ” ಎಂದು ಹೇಳಿದರು.

ಈ ಸಾಧನೆಯನ್ನು ಮೆಚ್ಚಿದ ಆಡಳಿತ ಮಂಡಳಿ ಅಧಿಕಾರಿ ಹೇಮಾ ಸುಧಾಕರ್,ಮತ್ತು ಬಿ ಸಿ ಐಗೋಳ್, ಅಧ್ಯಕ್ಷ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಪ್ರಾಂಶುಪಾಲ ಬಿಂಗಿ ವೆಂಕಟೇಶ್, ಮುಖ್ಯ ತರಬೇತುದಾರ ಮತ್ತು ದೈಹಿಕ ಶಿಕ್ಷಕ ಬಾಬುಸಾಬ್ ಹಾಗೂ ದೈಹಿಕ ಶಿಕ್ಷಕಿ ಗೀತಾ ಕೊಳ್ಳಿ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಅದ್ಭುತ ಸಾಧನೆ ಮಾಡಲು ಶುಭ ಹಾರೈಸಿದ್ದಾರೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 486+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 3535+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 3576+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 3633+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 3735+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 3783+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 3815+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 3859+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 3907+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 3920+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 3994+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4054+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6275+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6337+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6388+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 6443+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 6605+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 6633+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 6763+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 6944+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9147+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9312+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9373+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 9545+