ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಮೇಲೆ ಲೈಂಗಿಕ ಕಿರುಕುಳ ಆರೋಪ...! ಬಂಧನ
ಮಲಯಾಳಂ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಹೇಮಾ ಸಮಿತಿ ವರದಿಯಲ್ಲಿ ಅವರ ವಿರುದ್ಧ ಸಾಕಷ್ಟು ಆರೋಪಗಳಿದ್ದವು. ಯುವ ನಟಿಯ ದೂರಿನ ಆಧಾರದ ಮೇಲೆ ಎರ್ನಾಕುಲಮ್ ಪೊಲೀಸರು ಅವರನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ. ಶೂಟಿಂಗ್ ವೇಳೆ ನಟಿಗೆ ಕಿರುಕುಳ ನೀಡಿದ ಆರೋಪವಿದೆ. ಮಲಯಾಳಂ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರು ಲೈಂಗಿಕ ಕಿರಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಹೇಮಾ ಕಮಿಟಿ ವರದಿಯಲ್ಲಿ ಇವರ ಬಗ್ಗೆ ಈ ರೀತಿಯ ಸಾಕಷ್ಟು ಆರೋಪಗಳು ಎದುರಾಗಿದ್ದವು. ಈಗ ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿಯರಿಗೆ ಇವರು ಸಾಕಷ್ಟು ಕಿರುಕುಳ ನೀಡಿದ್ದರು ಎನ್ನಲಾಗಿದೆ. ಯುವ ನಟಿಯೊಬ್ಬರು ರಂಜಿತ್ ಮೇಲೆ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆಟ್ನಲ್ಲಿ ರಂಜಿತ್ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಾಥಮಿಕ ವರದಿ ಆಧರಿಸಿ ಅವರನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ. ಕಾರ್ಯಕ್ರ ಒಂದಕ್ಕೆ ಅವರು ತೆರಳುತ್ತಿದ್ದರು ಎಂದು ವರದಿ ಆಗಿದೆ. ರಂಜಿತ್ ಅವರು ಶೂಟಿಂಗ್ ವೇಳೆ ನಟಿಯನ್ನು ಕ್ಯಾರವಾನ್ಗೆ ಕರೆದರಂತೆ. ಲೈಂಗಿಕ ಉದ್ದೇಶ ಇಟ್ಟುಕೊಂಡು ಅವರು ತಪ್ಪಾಗಿ ನಡೆದುಕೊಂಡರು ಎಂದು ನಟಿ ದೂರಲ್ಲಿ ತಿಳಿಸಿದ್ದಾರೆ. ತಕ್ಷಣ ಸ್ಥಳದಿಂದ ತೆರಳಿದ ನಟಿ, ದೂರನ್ನು ದಾಖಲು ಮಾಡಿದರು. ಇದನ್ನು ಆಧರಿಸಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ನಿರ್ದೇಶಕನ ಬಂಧನ ಆಗಿದೆ.
ಇತರೆ ಸುದ್ದಿಗಳು