ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

 ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ! ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!
ವರದಿಗಾರರು : Shobha jagadish | ಸ್ಥಳ : BAN | ದಿನಾಂಕ : 25-04-2026

ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ! ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!

ಕರ್ನಾಟಕದಲ್ಲಿ ಮೇ 1 ರಿಂದ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದ್ದು, ಮದ್ಯದ ದರ ಶೇ 20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವುದರಿಂದ ಸಾಮಾನ್ಯ ಜನರು ಬಳಸುವ ಬ್ರಾಂಡ್‌ಗಳ ಬೆಲೆ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ದುಬಾರಿಯಾಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಇದೀಗ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಲು ಸರ್ಕಾರ ಸಜ್ಜಾಗಿದ್ದು, ಮೇ 1 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ. ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ 20ರಷ್ಟು ಏರಿಕೆಯಾಗಲಿದೆ. ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ 80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಅಂದಾಜಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1899+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2129+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4592+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4770+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4791+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4870+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7349+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7830+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7868+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13064+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13187+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13463+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13483+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27451+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30489+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30509+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30538+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33542+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33547+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33669+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33763+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33794+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39340+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39429+