ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಕಸದ ಸಮಸ್ಯೆ ...! ರಸ್ತೆಗಳಲ್ಲಿ ಕಸದ ರಾಶಿ
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಕಸದ ಸಮಸ್ಯೆ. ಜಿಬಿಎ ವ್ಯಾಪ್ತಿಯಲ್ಲಿ ಮತ್ತೆ ಕಸದ ಸಮಸ್ಯೆ ತಾರಕಕ್ಕೇರಿದೆ. ಇಂದು ಮತ್ತಷ್ಟು ವಾರ್ಡ್ಗಳಲ್ಲಿ ಕಸ ಸಂಗ್ರಹಣೆ ಮಾಡದಿರಲು ಆಟೋ- ಟಿಪ್ಪರ್ ಚಾಲಕರು ತೀರ್ಮಾನ ಮಾಡಿದ್ದು, ಮನೆ ಮನೆ ಕಸ ಸಂಗ್ರಹಣೆ ಬಂದ್ ಆಗಿದೆ. ಇದ್ರಿಂದ ರಾಜಧಾನಿಯಲ್ಲಿ ಕಸದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ನಗರದ ಹಲವೆಡೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಬೆಂಗಳೂರಿನ ರಸ್ತೆಗಳಲ್ಲಿ ರಾಶಿ-ರಾಶಿ ಕಸ ,ಕಸ ಸಂಗ್ರಹಿಸುವ ಆಟೋ-ಟಿಪ್ಪರ್ ಚಾಲಕರು ಹಾಗೂ ಸಹಾಯಕರು ಪ್ರತಿಭಟನೆಗೆ ಇಳಿದಿದ್ದು, ಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ತಲೆ ಎತ್ತಿದೆ. ಕಳೆದ ಮೂರು ದಿನಗಳಿಂದ ಮನೆ ಮನೆ ಕಸ ಸಂಗ್ರಹಣೆ ಬಂದ್ ಆಗಿದೆ. ನಗರದ ಹಲವು ರಸ್ತೆಗಳಲ್ಲಿ ಕಸದ ರಾಶಿ ರಾಶಿ ಬಿದ್ದಿವೆ. ಸಾರ್ವಜನಿಕರು ಸರಿಯಾಗಿ ಕಸ ವಿಂಗಡಣೆ ಮಾಡಲ್ಲ ಎಂದು ಪೌರ ಕಾರ್ಮಿಕರು ದೂರುತ್ತಿದ್ದು, ಕೆಲಸ ಮಾಡೋದನ್ನೇ ನಿಲ್ಲಿಸಿದ್ದಾರೆ. ಮೂರು ರೀತಿಯಲ್ಲಿ ಕಸ ವಿಂಗಡನೆ ಮಾಡಿಕೊಡುವಂತೆ ಹೆಲ್ಪರ್ಸ್ಗೆ ಜಿಬಿಎ ತಾಕೀತು ಮಾಡಿದೆ. ಈ ಬಗ್ಗೆ ಯಾವುದೇ ಟ್ರೈನಿಂಗ್ ಕೂಡ ನೀಡಿಲ್ಲ. ಇದರಿಂದ ಚಾಲಕರು ಹಾಗೂ ಹೆಲ್ಪರ್ಸ್ಗಳ ಕೈ ಗಳಿಗೆ ಗಾಯವಾಗಿದ್ದು, ಚರ್ಮ ಕಾಯಿಲೆಗಳಿಗೆ ತುತ್ತಾಗಿದ್ದರೆ. ಪ್ರತಿ ವಾರ್ಡ್ ನಲ್ಲೂ ಕಸ ವಿಂಗಡನೆ ಕೇಂದ್ರಗಳಿದ್ದರೂ ಕಸ ವಿಂಗಡನೆ ಜವಾಬ್ದಾರಿ ನಮಗೆ ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. ರಸ್ತೆಗಳಲ್ಲಿ ಸಾರ್ವಜನಿಕರು ಕಸವನ್ನು ಗುಡ್ಡೆ ಹಾಕಿ ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಆದಷ್ಟು ಬೇಗ ಕಸದ ಸಮಸ್ಯೆ ಬಗೆಹರಿಯಲಿದೆಯೇ ಕಾದು ನೋಡಬೇಕಾಗಿದೆ .
ಇತರೆ ಸುದ್ದಿಗಳು