ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

“ಅಯೋಧ್ಯೆಯಲ್ಲಿ ಧರ್ಮಧ್ವಜ: ಮರೆಮಾಚಿದ ಯುಗಗಳ ಪರದಿಯೇ ತೆರೆಯಿತು”
ವರದಿಗಾರರು : ರಮೇಶ ಅಂಗಡಿ | ಸ್ಥಳ : ಬಾಗಲಕೋಟೆ | ದಿನಾಂಕ : 26-11-2025

“ಅಯೋಧ್ಯೆಯಲ್ಲಿ ಧರ್ಮಧ್ವಜ: ಮರೆಮಾಚಿದ ಯುಗಗಳ ಪರದಿಯೇ ತೆರೆಯಿತು”

ಶ್ರೀರಾಮಮಂದಿರದ ಗೋಪುರದ ಮೇಲೆ ಧರ್ಮಧ್ವಜ ಅನಾವರಣಗೊಂಡುವುದರೊಂದಿಗೆ, ಅಯೋಧ್ಯೆ ಇಂದು ಕೇವಲ ಒಂದು ಧಾರ್ಮಿಕ ಆಚರಣೆಯ ಸನ್ನಿಧಿಯಾಗಿರದೆ, ಯುಗಯುಗಾಂತರಗಳಿಂದ ಮರೆಮಾಡಿಕೊಂಡಿದ್ದ ಅನೇಕ ಪೌರಾಣಿಕ-ಇತಿಹಾಸಿಕ ಸಂಗತಿಗಳಿಗೆ ನೂತನ ಮುನ್ನುಡಿ ಬರೆದಿದೆ. ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳಲ್ಲಿ ವಿಸ್ತೃತವಾಗಿ ಉಲ್ಲೇಖವಾಗಿದ್ದರೂ, ಕಾಲಕ್ರಮೇಣ ಜನಸ್ಮೃತಿಯಿಂದ ಅಳಿದುಹೋಗಿದ್ದ ಹಲವಾರು ಮಾಹಿತಿಗಳು ಮರಳಿ ಸಂಶೋಧಕರ ಗಮನಕ್ಕೆ ಬಂದಿರುವುದು ವಿಶೇಷ.

ಕೌರವಪಕ್ಷದ ಪರವಾಗಿ ಹೋರಾಡಿದ ಇಕ್ಷ್ವಾಕುವಂಶ ಸಾಮಾನ್ಯವಾಗಿ ಶ್ರೀರಾಮನ ವಂಶವೆಂದರೆ ತ್ರೇತಾಯುಗದ ಅಯೋಧ್ಯೆಯಷ್ಟೇ ಅಂತ ನಾವುಕಲ್ಪಿಸುವೆವು. ಆದರೆ, ಸಂಶೋಧನೆಗಳು ತೋರಿಸುವಂತೆ ಈ ವಂಶವು ದ್ವಾಪರಯುಗದಲ್ಲಿಯೂ ಅಸ್ತಿತ್ವದಲ್ಲಿತ್ತು. ಕರ್ಣನು ಕೋಸಲ ರಾಜ್ಯವನ್ನು ವಶಪಡಿಸಿಕೊಂಡ ಪರಿಣಾಮ, ಆ ಕಾಲದ ರಾಜ ಬೃಹದ್ಬಲನು ಕೌರವರ ಪರವಾಗಿ ಯುದ್ಧಕ್ಕಿಳಿದು, ಅಭಿಮನ್ಯುವಿನ ಕೈಯಲ್ಲಿ ಬಲಿದಾನವಾದನೆಂಬ ಉಲ್ಲೇಖಗಳೂ ದೊರೆತಿವೆ. ಇದರೊಂದಿಗೆ ಅಯೋಧ್ಯೆಯ ವೈಭವ ಕುಸಿದು, ಅದರ ಧ್ವಜ—ಧರ್ಮಧ್ವಜವೂ ಅಳಿದು ಹೋಗಿತು.

ಕೋವಿಧಾರಾ — ಅಯೋಧ್ಯೆಯ ಪುರಾತನ ಸಂಕರವೃಕ್ಷ ಇತ್ತೀಚೆಗೆ ಅಯೋಧ್ಯಾ ಕಾರಿಡಾರ್ ಮತ್ತು ರಾಮಮಂದಿರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಡಲಾಗುತ್ತಿರುವ ಕೋವಿಧಾರಾ ವೃಕ್ಷವು ಹೊಸ ಕುತೂಹಲವನ್ನು ಹುಟ್ಟುಹಾಕಿದೆ. ವಾಲ್ಮೀಕಿ ರಾಮಾಯಣದಲ್ಲಿ ವಿಶಿಷ್ಟವಾಗಿ ಪ್ರಶಂಸಿಸಲ್ಪಟ್ಟ ಈ ವೃಕ್ಷವು, ಆ ಕಾಲದಲ್ಲಿ ಶ್ರೀರಾಮನ ರಾಜ್ಯವೃಕ್ಷವಾಗಿತ್ತು ಹಾಗೂ ಇಕ್ಷ್ವಾಕು ಸಾಮ್ರಾಜ್ಯದ ಧ್ವಜದಲ್ಲೂ ಸ್ಥಾನ ಪಡೆದಿತ್ತು. ಇನ್ನೂ ವಿಶೇಷವೆಂದರೆ, ಕೋವಿಧಾರಾ ವೃಕ್ಷವನ್ನು ಪ್ರಪಂಚದ ಮೊದಲ ಸಂಕರಜಾತಿ (ಹೈಬ್ರಿಡೈಜೇಷನ್) ವೃಕ್ಷ ಎಂದು ಕೆಲ ಸಂಶೋಧಕರು ಪರಿಗಣಿಸುತ್ತಿದ್ದಾರೆ. ಋಷಿ ಕಶ್ಯಪರು ಮಂದಾರ ಮತ್ತು ಪಾರಿಜಾತ ವೃಕ್ಷಗಳನ್ನು ಸಂಕರಗೊಳಿಸಿ ಇದನ್ನು ಸೃಷ್ಟಿಸಿದರೆಂಬ ಪುರಾತನ ಉಲ್ಲೇಖಗಳು ಇವೆ. ಇಂದಿನ ಪಠ್ಯಪುಸ್ತಕಗಳು ಸಂಕರಗೊಳಿಸುವಿಕೆ 17ನೇ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಹೇಳುವ ಸಂದರ್ಭದಲ್ಲಿ, ಈ ಹೊಸ ಸಂಶೋಧನೆಗಳು ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

ಅಯೋಧ್ಯೆಯ ಪುರಾತನ ನಾಗರಿಕತೆಯ ಕುರಿತು ಹೊಸ ಚರ್ಚೆ ಅಯೋಧ್ಯೆಯ ಧ್ವಜದಲ್ಲಿ ಪುನಃಸ್ಥಾಪಿತಗೊಂಡಿರುವ ಈ ವೃಕ್ಷದ ಜೆನೆಟಿಕ್ ಅಧ್ಯಯನಗಳು ತ್ರೇತಾಯುಗದತ್ತ ಕೊಂಡೊಯ್ಯುವ ಸಾಧ್ಯತೆಗಳನ್ನು ಸಂಶೋಧಕರು ಸೂಚಿಸುತ್ತಿರುವುದರಿಂದ, “ಪ್ರಪಂಚದ ಮೊದಲ ನಾಗರಿಕತೆ ಯಾವುದು?” ಎಂಬ ಪ್ರಶ್ನೆ ಮರುಚರ್ಚೆಗೆ ಬಂದಿದೆ. ರಾಮಾಯಣ–ಮಹಾಭಾರತಗಳನ್ನು ಫ್ಯಾಂಟಸಿ ಕೃತಿಗಳೆಂದು ಪರಿಗಣಿಸುವ ವಾದಗಳಿಗೂ ಹೊಸ ಪ್ರಶ್ನೆಗಳು ಉದಯವಾಗಿವೆ.

ವಾಲ್ಮೀಕಿ ರಾಮಾಯಣದ ಮರೆಮಾಚಿದ ಉಲ್ಲೇಖಗಳ ಪುನರುತ್ಥಾನ ಸುಮಾರು ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಲ್ಲಿ ಕೋವಿಧಾರಾ ವೃಕ್ಷ ಅಥವಾ ಈ ಮೂಲ ಧ್ವಜದ ಉಲ್ಲೇಖವಿಲ್ಲ. ವಾಲ್ಮೀಕಿ ರಾಮಾಯಣದಲ್ಲಿರುವ ಉಲ್ಲೇಖವೂ ಇಂದಿನವರೆಗೆ ಸಂಶೋಧನೆಯಲ್ಲಿ ಮುನ್ನಲೆಗೆ ಬಂದಿರಲಿಲ್ಲ. ಈ ಹಿನ್ನೆಲೆ, ಧರ್ಮಧ್ವಜದ ಅನಾವರಣವು ಐತಿಹಾಸಿಕ ಸಂಶೋಧನೆಗೆ ಹೊಸ ದಿಕ್ಕನ್ನು ತೋರಿಸಬಹುದು ಎಂದು ವೀಕ್ಷಿಸಲಾಗಿದೆ.

ಅಯೋಧ್ಯೆ ಪುನರ್‌ಸೃಷ್ಟಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಮೆಚ್ಚುಗೆ ಶ್ರೀರಾಮಮಂದಿರ ನಿರ್ಮಾಣ ಮಾತ್ರವಲ್ಲದೆ, ಪುರಾತನ ನಗರಿಯ ಮೂಲಸಂಸ್ಕೃತಿಯನ್ನು ಪುನರ್‌ಜೀವಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುನ್ನಡೆಸಿರುವುದಾಗಿ ಅಯೋಧ್ಯೆಯ ಜನಾಭಿಪ್ರಾಯ. ತ್ರೇತಾಯುಗದ ಮರಗಳನ್ನು ಮರುಸ್ಥಾಪಿಸಿ, ಅಯೋಧ್ಯೆಯನ್ನು ಹಸಿರುಗೊಳಿಸಿರುವುದು ಅದಕ್ಕೆ ಮತ್ತೊಂದು ಉದಾಹರಣೆ.

ಅಯೋಧ್ಯೆಗೆ ಭೇಟಿ ನೀಡುವವರಿಗೆ ವಿಶೇಷ సూచನೆ ಮುಂದಿನ ಬಾರಿ ಅಯೋಧ್ಯೆಗೆ ತೆರಳಿದಾಗ, ಹೊಸದುರ್ಗದಲ್ಲಿ ಅನಾವರಣಗೊಂಡ ಧರ್ಮಧ್ವಜ ಹಾಗೂ ಅದರಲ್ಲಿರುವ ಇಕ್ಷ್ವಾಕು ವಂಶದ ಸೂರ್ಯಚಿಹ್ನೆಯ ಜೊತೆಗೆ, ತ್ರೇತಾಯುಗದ ಪುರಾತನ ಕೋವಿಧಾರಾ ವೃಕ್ಷವನ್ನೂ ಕಣ್ತುಂಬಿಕೊಳ್ಳಲು ಮರೆಯಬೇಡಿ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 375+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 3425+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 3466+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 3523+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 3625+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 3673+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 3705+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 3749+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 3797+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 3810+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 3884+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 3944+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6165+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6227+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6278+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 6333+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 6495+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 6523+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 6653+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 6834+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9037+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9202+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9263+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 9435+