ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

 ಭಾರತಕ್ಕೂ ಕಾಲು ಇಟ್ಟಿದೀಯಾ ಝೋಂಬಿ ಡ್ರಗ್ ? ನಿಂತಲ್ಲೇ ತೂಗಾಡಿದ ಡೆಲಿವರಿ ಯುವಕ
ವರದಿಗಾರರು : shobha jagadish | ಸ್ಥಳ : ಬೆಂಗಳೂರು | ದಿನಾಂಕ : 26-03-2026

ಭಾರತಕ್ಕೂ ಕಾಲು ಇಟ್ಟಿದೀಯಾ ಝೋಂಬಿ ಡ್ರಗ್ ? ನಿಂತಲ್ಲೇ ತೂಗಾಡಿದ ಡೆಲಿವರಿ ಯುವಕ

ಪಂಜಾಬ್‌ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಉಂಟುಮಾಡಿದೆ. ಪಂಜಾಬ್‌ನಲ್ಲಿ ಮಾದಕ ಜಾಲದ ದಂಧೆ ತೀವ್ರವಾಗಿದ್ದು, ನವತರುಣರು ಈ ಡ್ರಗ್‌ ಚಟಕ್ಕೆ ಬಿದ್ದು, ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ನಮ್ಮ ರಾಜ್ಯದಲ್ಲಿ ಮದ್ಯವರ್ಜನ ಶಿಬಿರಗಳಿರುವಂತೆ ಅಲ್ಲಿ ಡ್ರಗ್ ನಿರ್ಮೂಲನೆಗೆ ಶಿಬಿರಗಳಿವೆ. ಅಷ್ಟರ ಮಟ್ಟಿಗೆ ಅಲ್ಲಿನ ಯುವಕರು ತರುಣರು ಡ್ರಗ್‌ಗೆ ದಾಸರಾಗಿದ್ದಾರೆ. ಪಂಜಾಬ್‌ನ ಡ್ರಗ್ ಜಾಲಕ್ಕೆ ಹೇಗೆ ಅಲ್ಲಿನ ಯುವ ಸಮೂಹದ ಜನರು ಬಲಿಯಾಗ್ತಿದ್ದಾರೆ ಎಂಬುದನ್ನು ನೀವು 2016ರ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನೋಡಬಹುದಾಗಿದೆ. ಪಂಜಾಬ್‌ನ ಸ್ಥಿತಿಯಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಲಿಲ್ಲ. ಹತ್ತಿರವೇ ಪಾಕಿಸ್ತಾನದ ಗಡಿಯೂ ಇರುವುದರಿಂದ ಇಲ್ಲಿಗೆ ಎಷ್ಟು ತಡೆಗಟ್ಟಲು ಪ್ರಯತ್ನಿಸಿದರು ಯಾವುದಾದರೊಂದು ಕಳ್ಳದಾರಿಯಲ್ಲಿ ಡ್ರಗ್ಸ್ ಬರುತ್ತಲೇ ಇರುತ್ತದೆ. ಹೀಗಿರುವಾಗ ಇಲ್ಲೊಂದು ಕಡೆ ಡ್ರಗ್ ಜಾಲಕ್ಕೆ ತುತ್ತಾಗಿ ಯುವಕನೋರ್ವ ಝೋಂಬಿಯಂತೆ ನಿಂತಲೇ ತೂಗಾಡುತ್ತಿರುವ ವೀಡಿಯೋವೊಂದು ಭಾರಿ ವೈರಲ್ ಆಗಿದ್ದು, ಅಲ್ಲಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದನ್ನು ತೋರಿಸುತ್ತಿದೆ.ಹೌದು ಡೆಲಿವರಿ ಕೆಲಸ ಮಾಡುವ ಯುವಕನೋರ್ವ ಬೆನ್ನಿಗೆ ಬ್ಲಿಂಕಿಟ್ ಬ್ಯಾಗ್ ನೇತು ಹಾಕಿಕೊಂಡು ನಿಂತಲ್ಲೇ ತೂಗಾಡುತ್ತಿದ್ದಾನೆ. ಕೆಲ ವರದಿಗಳ ಪ್ರಕಾರ ಈತ ಸುಮಾರು 2 ಗಂಟೆಗಳ ಕಾಲ ಇದೇ ಸ್ಥಿತಿಯಲ್ಲಿದ್ದ ಎಂದು ವರದಿಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಇದ್ದ ಇಂತಹ ಝೋಂಬಿ ಡ್ರಗ್ ಭಾರತಕ್ಕೂ ಕಾಲಿಟ್ಟಿದೆಯಾ ಎಂಬ ಅನುಮಾನ ಹಲವರನ್ನು ಕಾಡಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1909+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2139+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4602+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4780+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4801+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4880+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7359+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7840+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7878+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13074+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13197+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13473+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13493+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27461+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30499+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30519+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30548+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33552+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33557+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33679+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33773+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33804+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39350+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39439+