ನಕಲಿ ವೈದ್ಯನ ಎಡವಟ್ಟಿಗೆ 9ನೇ ತರಗತಿ ವಿದ್ಯಾರ್ಥಿ ಸಾವು...!
ರಾಯಚೂರು ಜಿಲ್ಲೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಸಿಂಧೂ ಇಂಜೆಕ್ಷನ್ ನೀಡಿದ ನಂತರ ಮೃತಪಟ್ಟಿದ್ದಾಳೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ . ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 13 ವರ್ಷದ ಬಾಲಕಿಗೆ ವೈದ್ಯ ನೀಡಿದ ಇಂಜೆಕ್ಷನ್ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಲಕಿಯ ಪೋಷಕರು ಉತ್ತಮ ಕುಮಾರ್ ಸರ್ಕಾರ್ ಎಂಬಾತ ನಕಲಿ ವೈದ್ಯ ಎಂದು ಆರೋಪ ಮಾಡಿದ್ದಾರೆ. ಮೃತ ಬಾಲಕಿ 9ನೇ ತರಗತಿ ಓದುತ್ತಿದ್ದಳು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದ ಸಿಂಧೂ ಮೃತ ಬಾಲಕಿ. ಮಾರ್ಚ್ 26ರಂದು ಸಿಂಧೂ ಜ್ವರದಿಂದ ಬಳಲುತ್ತಿದ್ದಳು. ಉತ್ತಮ ಕುಮಾರ್ ಸರ್ಕಾರ್ ತೆರಳಿದ್ದ ಸಿಂಧೂ, ಚಿಕಿತ್ಸೆ ಪಡೆದುಕೊಂಡಿದ್ದಳು. ಚಿಕಿತ್ಸೆ ಬಳಿಕ ಸಿಂಧೂ ಪರೀಕ್ಷೆಗೆ ಹಾಜರಾಗಿದ್ದಳು. ಇಂಜೆಕ್ಷನ್ ಪಡೆದ ರಾತ್ರಿ ಸಿಂಧೂ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ನೋವಿನಿಂದ ನರಳಾಡಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಿಂಧೂ ಸಾವನ್ನಪ್ಪಿದ್ದಾಳೆ.
ಇತರೆ ಸುದ್ದಿಗಳು