ಇರಾನ್‌ಗೆ ಜಮ್ಮು-ಕಾಶ್ಮೀರ ಮುಸ್ಲಿಮರಿಂದ ಸಹಾಯಹಸ್ತ... ಚಿನ್ನ ಬೆಳ್ಳಿ ದೇಣಿಗೆ
ಜಮ್ಮು ಮತ್ತು ಕಾಶ್ಮೀರ : ಇರಾನ್ ಬೆನ್ನಿಗೆ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಸಮುದಾಯದ ಜನರು ನಿಂತಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಪೀಡಿತ ಜನರ ಪರಿಹಾರ ನಿಧಿಗೆ ಕಾಶ್ಮೀರದ ಹಲವಾರು ಪ್ರದೇಶಗಳ ಮುಸ್ಲಿಂ ನಿವಾಸಿಗಳು ತಮ್ಮ ಬಳಿ ಇರುವ ನಗದು, ಚಿನ್ನ, ಬೆಳ್ಳಿ ಮತ್ತು ತಾಮ್ರದ ಪಾತ್ರೆಗಳನ್ನು ದಾನ ಮಾಡಿದ್ದಾರೆ. ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯಾದಾಗ ಭಾರತದಲ್ಲೂ ಶಿಯಾ ಮುಸ್ಲಿಮರು ಕಂಬನಿ ಮಿಡಿದಿದ್ದರು. ಚಿಕ್ಕಬಳ್ಳಾಪುರದ ಅಲಿಪುರದಲ್ಲೂ ಸಂತಾಪ, ಪ್ರತಿಭಟನೆ ನಡೆದಿತ್ತು. ಇದೀಗ ಇರಾನ್ ಬೆನ್ನಿಗೆ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಸಮುದಾಯದ ಜನರು ನಿಂತಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಪೀಡಿತ ಜನರ ಪರಿಹಾರ ನಿಧಿಗೆ ಕಾಶ್ಮೀರದ ಹಲವಾರು ಪ್ರದೇಶಗಳ ಮುಸ್ಲಿಂ ನಿವಾಸಿಗಳು ತಮ್ಮ ಬಳಿ ಇರುವ ನಗದು, ಚಿನ್ನ, ಬೆಳ್ಳಿ ಮತ್ತು ತಾಮ್ರದ ಪಾತ್ರೆಗಳನ್ನು ದಾನ ಮಾಡಿದ್ದಾರೆ. ಹೆಚ್ಚಿನ ದೇಣಿಗೆಗಳನ್ನು ಬುಡ್ಗಾಮ್ ಮತ್ತು ಬಾರಾಮುಲ್ಲಾದಂತಹ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ, ಅಲ್ಲಿ ಶಿಯಾ ಜನಸಂಖ್ಯೆ ಗಣನೀಯವಾಗಿದಾದ್ದು, ಯುದ್ಧ ಪೀಡಿತ ಇರಾನ್ ನಾಗರಿಕರೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಬುಡ್ಗಾಮ್‌ನ ಸ್ಥಳೀಯರು ನಗದು ಜೊತೆಗೆ ಅಮೂಲ್ಯ ಲೋಹಗಳನ್ನು ದಾನ ಮಾಡಿದ್ದಾರೆ.
ಇತರೆ ಸುದ್ದಿಗಳು