ಸದನದಲ್ಲೇ ಮುನಿರತ್ನ, ಡಿಕೆ ಶಿವಕುಮಾರ್ ನಡುವೆ ಬಿಗ್ ಟಾಕ್ ವಾರ್!
ವಿಧಾನಸಭೆ : ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳಂತೆ ಗುದ್ದಾಡಿರುವ ಡಿಕೆಶಿ ಹಾಗೂ ಮುನಿರತ್ನ ಫೈಟ್ ಸದನವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ವಾಕ್ಸಮರ ತಾರಕ್ಕೇರಿದೆ. ಮುನಿರತ್ನ ಕೇಸ್ಗಳ ಬಗ್ಗೆ ಮಾತಾಡೋದು ಬೇಕಾದಷ್ಟಿದೆ ಎಂದು ಡಿಕೆಶಿ ಮಾತು ಶುರು ಮಾಡ್ತಿದ್ದಂತೆ, ಅದೇನ್ ಹೇಳ್ತಿರೋ ಎಲ್ಲಾ ಹೇಳಿ ಎಂದು ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಸಿಟ್ಟಾದ ಡಿಸಿಎಂ ಡಿಕೆ ಶಿವಕುಮಾರ್, ನೀನೊಬ್ಬ ರೆ*ಸ್ಟ್ ಎಂದಿದ್ದಾರೆ. ಡಿಕೆಶಿ ಮಾತು ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಮುನಿರತ್ನ ಕೇಸ್ ಬಗ್ಗೆ ಚರ್ಚೆ ಮಾಡ್ಬೇಕು ಅಂದ್ರೆ ಮಾಡೋಕೆ ರೆಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಅದೇನ್ ಹೇಳ್ತೀರಾ ಎಲ್ಲವನ್ನೂ ಹೇಳಿ ಎಂದ ಶಾಸಕ ಮುನಿರತ್ನ ರೊಚ್ಚಿಗೆದ್ರು. ಬಳಿಕ ಆಯ್ತಣ್ಣ ಮುನಿರತ್ನ ಕೂತ್ಕೊಳ್ಳಣ ಎಂದು ಡಿಸಿಎಂ ಡಿಕೆಶಿ ಸಿಟ್ಟು ಪ್ರದರ್ಶಿಸಿದ್ದಾರೆ. ಹೇಗೆ ಏಡ್ಸ್ ಇಂಜೆಕ್ಷನ್ ಚುಚ್ಚಿದ್ರು ಎಂದು ಎಫ್ಐಆರ್ ನಲ್ಲಿದೆ ಎಂದು ಡಿಕೆ ಶಿವಕುಮಾರ್ ಹೇಳ್ತಿದ್ದಂತೆ ಡಿಕೆ ಮಾತಿಗೆ ಅಶೋಕ್, ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ರು. ಬಳಿಕ ಶಾಸಕ ಮುನಿರತ್ನ ಈ ಬಗ್ಗೆ ಚರ್ಚೆಗೆ ಬಿಗಿ ಪಟ್ಟು ಹಿಡಿದು ವಾಗ್ದಾಳಿ ಮುಂದುವರೆಸಿದ್ದಾರೆ .
ಇತರೆ ಸುದ್ದಿಗಳು