30 ಹುಡಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಬಿಜೆಪಿ ನಾಯಕನ ಪುತ್ರ ಅರೆಸ್ಟ್ ...!
ಗೋವಾ : 30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ ಆಗಿದ್ದಾನೆ. ಬೆದರಿಸಿ ಅಪ್ರಾಪ್ತರ ಮೇಲೆ ಅತ್ಯಾ**ರ ಎಸಗುತ್ತಿದ್ದ ಈತ ವಿಡಿಯೋ ಮಾಡಿ ಹೆದರಿಸುತ್ತಿದ್ದನಂತೆ. ಇದೀಗ ವಿಡಿಯೋ ಲೀಕ್ ಆಗಿದ್ದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಬಿಜೆಪಿ ಮುಖಂಡನೊಬ್ಬನ ಪುತ್ರನ ಪ್ರಕರಣ ಬಯಲಾಗಿದೆ. 30 ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ಕೃತ್ಯವನ್ನೇ ಈತನೇ ವಿಡಿಯೋ ಮಾಡಿ ಬಳಿಕ ಬ್ಲಾಕ್‌ಮೇಲ್ ಮಾಡುವ, ಬೆದರಿಸುವ ತಂತ್ರ ಪ್ರಯೋಗಿಸಿ ಕಳೆದ ಮೂರು ವರ್ಷದಿಂದ ರಾಜಾರೋಷವಾಗಿ ತಿರುಗಾಡುತ್ತಿದ್ದ ಕಾಮುಕ ಆರೋಪಿಯನ್ನು ಅರೆಸ್ಟ್ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಪುತ್ರ 20 ವರ್ಷದ ಸೋಹಮ್ ನಾಯಕ್ ಅರೆಸ್ಟ್ ಆಗಿದ್ದಾನೆ. ಕೆಲ ವಿಡಿಯೋಗಳು ಹೊರಬಂದ ಬೆನ್ನಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸೋಹಮ್ ನಾಯಕ್‌ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆಯರೊಂದಿಗೆ ಪಾರ್ಟಿ, ಸುತ್ತಾಟ , ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿರುವುದೇ ಈತನ ಹವ್ಯಾಸವಾಗಿತ್ತು. ಕಳೆದ ಮೂರು ವರ್ಷದಿಂದ ಈತ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದ. ಕಳೆದ ವಾರ ಮದ್ಯದ ನಶೆಯಲ್ಲಿ ಗೆಳೆಯರಿಗೆ ತನ್ನ ಕೆಲ ವಿಡಿಯೋಗಳನ್ನು ಫಾರ್ವಡ್ ಮಾಡಿದ್ದ. ಹೀಗೆ ಫಾರ್ವಡ್ ಮಾಡಿದ ಬೆನ್ನಲ್ಲೇ ವಿಡಿಯೋಗಳು ವ್ಯಾಟ್ಸಾಪ್ ಮೂಲಕ ಹರಿದಾಡಲು ಆರಂಭಗೊಂಡಿತ್ತು. ಇದು ಸಾರ್ವಜನಿಕ ವಲಯದಲ್ಲಿ ಆತಂಕ ತಂದಿತ್ತು. ಹಲವು ಅಪ್ರಾಪ್ತ ಬಾಲಕಿಯರು ಈತನ ಕಾಮಕ್ಕೆ ಬಲಿಯಾಗಿದ್ದರು. ಸಾರ್ವಜನಿಕ ಆಕ್ರೋಶ ತೀವ್ರಗೊಂಡಿತ್ತು. ಪ್ರತಿಭಟನೆಗಳು ತೀವ್ರಗೊಂಡಿತ್ತು. ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತರೆ ಸುದ್ದಿಗಳು