ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಅನಿಸಿಕೆ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 15-12-2025

ಅನಿಸಿಕೆ

ಮನರಂಜನೆಗೆ ಯಾಕೆ ಸಿಕ್ತಿಲ್ಲ ಮನ್ನಣೆ...?

ಇಂದು ಮನರಂಜನೆ ಅನ್ನೋದು ಕೇವಲ ವಸ್ತುವಾಗಿ ,ಜಾಹೀರಾತಿನಂತೆ ಕಡೆಗಣಿಸುವಷ್ಟು ಬೇಡವಾಗಿ ಹೋಗಿದೆ.

ಅದೊಂದು ಕಾಲವಿತ್ತು. ಮನರಂಜನೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾಲ. ಆಗ ಮನರಂಜನೆಯ ಕಾರ್ಯಕ್ರಮಗಳನ್ನು ಮನಸೋ ಇಚ್ಛೆ ನೋಡಿ ಆನಂದಿಸುತ್ತಿದ್ದೇವು. ಮತ್ತೆ ಮತ್ತೆ ನೋಡಬೇಕಿಸುತ್ತಿತ್ತು.

ಆದರೆ ಇಂದು ಯಾಕೆ ಈ ಮನರಂಜನೆ ಮತ್ತು ಮನರಂಜನೆಯ ಕಾರ್ಯಕ್ರಮಗಳು ಸೊರಗತೊಡಗಿವೆ. ಅಸಲಿಗೆ ಇಂದಿನ ತಲೆಮಾರು ಹಿಂದಿನ ತಲೆಮಾರು ಅನ್ನೋದಕ್ಕಿಂತ ಹೆಚ್ಚಾಗಿ ವೇದಿಕೆಯ ಕೆಳಗೆ ಕುಳಿತು ಆಸ್ವಾದಿಸಬೇಕಿದ್ದ ಪ್ರೇಕ್ಷಕನೇ ಇಂದು ಮನರಂಜನೆಯ ವೇದಿಕೆಯಲ್ಲಿ ರಂಜಿಸುವಂತವನಾಗಿದ್ದಾನೆ‌.

ಕುತೂಹಲ ಮತ್ತು ಪೂರೈಕೆಗಳು ಅದರ ಬೇಡಿಕೆಗಳಿಗಿಂತ ಹಚ್ಚು ಹೆಚ್ಚಾಗಿ ಶ್ರಮವಿಲ್ಲದೇ ದೊರೆತಾಗ ಅದರ ಕುರಿತು ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ‌.

ಅಂಗೈಯಲ್ಲಿ ತಂತ್ರಜ್ಞಾನ ಮತ್ತು ಅದನ್ನು ಪ್ರಚುರಪಡಿಸುವ ಕಲೆ ಎಲ್ಲರಿಗೂ ಕರಗತವಾಗಿವೆ. ನೋಡುವವರಿಗಿಂತ ಮಾಡಿ ತೋರುವವರೇ ಅಧಿಕವಾಗಿದ್ದಾರೆ. ಮನರಂಜನೆಯ ಕಥಾ ವಸ್ತು ತರ್ಕ ಕುತರ್ಕಗಳಿಂದ ಮಿಳಿತವಾಗಿವೆ‌. ಒಂದು ವೇದಿಕೆಯಲ್ಲಿ ನೋಡುಗರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಬಂದಿರುವ ನೋಡುಗರ ಪ್ರತಿಯೋರ್ವರಲ್ಲಿಯೂ ಒಂದೊಂದು ವೇದಿಕೆ ಸೃಷ್ಠಿಯಾಗುತ್ತಿವೆ.

ಸಿನೆಮಾ ಧಾರವಾಹಿ ರಂಗಭೂಮಿ. ಎಲ್ಲ ಪ್ಲಾಟ್ಪಾರ್ಮುಗಳು ಖಾಲಿ ಖಾಲಿ . ಸಾಮಾಜಿಕ ಜಾಲತಾಣ ಎಲ್ಲವನ್ನ ನುಂಗಿಬಿಟ್ಟಿವೆ‌. ಇದು ಕೇವಲ ಮನರಂಜನೆ ಕ್ಷೇತ್ರಕ್ಕೆ ಮಾತ್ರವಲ್ಲ ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿವೆ. ಮೊಬೈಲ್ ಒಂದು ಕ್ಷಣ ಕಾಣದಿದ್ದರೆ ಎದೆ ಝಲ್ ಎನ್ನುವಂತೆ ಮಾಡಿದೆ.

ಕುತೂಹಲವಿಲ್ಲದ ಮನಸ್ಸು, ಸದಾ ಒತ್ತಡದ ಜಂಜಾಟ. ಯಾಂತ್ರೀಕೃತ ಕೆಲಸ ಬೇಕೆಂದಾಗ ಸಿಗುವ ಸೌಲಭ್ಯಗಳು. ಇದರಿಂದ ಮನುಷ್ಯನ ನಾಳಿನ ಬದುಕು ಹೇಗರಲಿದೆ ಎಂದು ಊಹಿಸಲೂ ಅಸಾಧ್ಯ..

ಮನುಷ್ಯ ಮನುಷ್ಯನ ನಡುವೆ ಸಂಬಂಧ ಸೇತು ಶಕ್ತಿಹೀನವಾಗಿದೆ. ಕುಟುಂಬಗಳಲ್ಲಿರುವ ಸದಸ್ಯರುಗಳನ್ನ ಮೊಬೈಲ್ ದೂರಮಾಡುತ್ತಿದೆ.

ಇದೇ ರೀತಿ ಮುಂದುವರೆಯುತ್ತಿದ್ದರೆ ಪಶುಗಳಿಗೂ ಮಾನವರಿಗೂ ಯಾವ ಭೇಧವೂ ಇರಲಾರದೆಂದೆನಿಸುತ್ತಿದೆ‌ .

ನಾಳಿನ ಭವಿಷ್ಯ ??

ನಾಳಿನ ಬಗ್ಗೆ ಯಾರಿಗ್ ಗೊತ್ ಗುರು.. ಇದು ಎಲ್ಲರಲ್ಲೂ ಕೇಳಿ ಬರುವ ಸಾಮಾನ್ಯ ಡೈಲಾಗ್..

ಮತ್ತೆ ಅಣಿಯಾದ್ರು ಮೊಬೈಲ್ ಎಂಬ ಭೂಗತ ಲೋಕಕ್ಕೆ......!!!!!!

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1899+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 2129+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4592+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4770+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4791+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4870+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7349+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7830+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7868+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 13064+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13187+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13463+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13483+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27451+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30489+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30509+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30538+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33542+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33547+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33669+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33763+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33794+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39340+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39429+