ಬಿಸಿಲ ಧಗೆಯ ತಣಿಸಲು ವರುಣನ ಎಂಟ್ರಿ ! ಏಪ್ರಿಲ್ 10ರವರೆಗೆ ಕೂಲ್ ಕೂಲ್
ಹವಾಮಾನ ಇಲಾಖೆಯಿಂದ ಮಾರ್ಚ್ 10ರವರೆಗೆ ಕರ್ನಾಟಕದ ಕರಾವಳಿ ಮಲೆನಾಡು ದಕ್ಷಿಣ ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಿಗೆ ಗುಡುಗು ಮಿಂಚು ಸಹಿತ ಬಾರಿ ಮಳೆಯ ಮುನ್ಸೂಚನೆ, ಹಾಗು ಎಲ್ಲೋ ಅಲರ್ಟ್ ಘೋಷಿಸಿದೆ. ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿನ ನಡುವೆಯೇ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೇ ಕೆಲ ಜಿಲ್ಲೆಗಳಿಗೆ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಉತ್ತರ ಮತ್ತು ದಕ್ಷಿಣ ಒಳನಾಡಿನ ಕಥೆಯೇನು?-ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮಳೆಯಾಗುವ ಲಕ್ಷಣಗಳಿವೆ. ಇನ್ನು ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯದ ಮಂದಿಗೆ ರಾತ್ರಿ ಸಮಯದಲ್ಲಿ ಸಾಧಾರಣ ಮಳೆಯಾಗುವ ಮೂಲಕ ಬಿಸಿಲ ಬೇಗೆಯಿಂದ ಸ್ವಲ್ಪ ಮುಕ್ತಿ ಸಿಗಲಿದೆ.ಮತ್ತೆ ಮಳೆ ಯಾವಾಗ ಶುರು?-ಹವಾಮಾನ ವರದಿಯ ಪ್ರಕಾರ, ಏಪ್ರಿಲ್ 5ರ ನಂತರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ಆದರೆ, ಅಸಲಿ ಆಟ ಶುರುವಾಗುವುದು ಏಪ್ರಿಲ್ 10ರ ನಂತರ. ಹೌದು, ಆ ದಿನಾಂಕದ ಬಳಿಕ ರಾಜ್ಯದಾದ್ಯಂತ ಮತ್ತೆ ಮಳೆ ಮುಂದುವರಿಯುವ ಬಲವಾದ ಲಕ್ಷಣಗಳಿವೆ. ಹಾಗಾಗಿ, ರೈತರು ಮತ್ತು ಸಾರ್ವಜನಿಕರು ಹವಾಮಾನದಲ್ಲಿನ ಈ ಕ್ಷಣ ಕ್ಷಣದ ಬದಲಾವಣೆಯ ಮೇಲೆ ಕಣ್ಣಿಡುವುದು ಒಳಿತು.ಕರಾವಳಿ ಕರ್ನಾಟಕ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಏಪ್ರಿಲ್ 4 ರಂದು ಗುಡುಗು ಹಾಗೂ ಮಿಂಚು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ಕಾರಣದಿಂದಾಗಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ ನೀಡಿದೆ. ಆದರೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಒಣ ಹವೆ ಮುಂದುವರಿಯುವ ಸಾಧ್ಯತೆಯೂ ಇದೆ.
ಇತರೆ ಸುದ್ದಿಗಳು