3 ಕೋಟಿಗೂ ಹೆಚ್ಚು ಸಬ್ಸ್ಕ್ರೈಬರ್ ಹೊಂದಿರುವ ಜನಪ್ರಿಯ ನಾಯಕ ಮೋದಿ ಜಿ ...
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಈಗ 3 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದು, ಈ ಮೈಲಿಗಲ್ಲು ಅವರನ್ನು ಯೂಟ್ಯೂಬ್ ಚಾನೆಲ್ ವೇದಿಕೆಯಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವ ನಾಯಕರಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ . ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಏಳು ಪಟ್ಟು ಹೆಚ್ಚು ಸಬ್ಸ್ಕ್ರೈಬರ್‌ಗಳನ್ನು ಮೋದಿ ಹೊಂದಿರುವುದು ಅವರ ಜಾಗತಿಕ ಹಾಗೂ ಡಿಜಿಟಲ್ ತಲುಪುವಿಕೆಯ ಪ್ರಮಾಣವನ್ನು ತೋರಿಸುತ್ತದೆ. ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಎರಡನೇ ಅತಿ ಹೆಚ್ಚು ಸಬ್ಸ್ಕ್ರೈಬರ್‌ಗಳನ್ನು ಹೊಂದಿದ್ದರೂ, ಅವರ ಸಂಖ್ಯೆ ಮೋದಿ ಅವರಿಗಿಂತ ಸುಮಾರು ನಾಲ್ಕನೇ ಭಾಗದಷ್ಟೇ ಇದೆ. ಭಾರತದಲ್ಲಿ, ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗಿಂತ ಮೂರು ಪಟ್ಟು ಹೆಚ್ಚು ಸಬ್ಸ್ಕ್ರೈಬರ್‌ಗಳಿದ್ದು, ಮತ್ತು ಪಕ್ಷಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ. 3 ಕೋಟಿಗೂ ಅಧಿಕ ಸಬ್ಸ್ಕ್ರೈಬರ್‌ಗಳೊಂದಿಗೆ, ಮೋದಿ ಅವರ ಯೂಟ್ಯೂಬ್ ಖಾತೆ ಜಾಗತಿಕವಾಗಿ ಅತಿ ಹೆಚ್ಚು ಸಬ್ಸ್ಕ್ರೈಬ್ ಮಾಡಲ್ಪಟ್ಟ ಚಾನೆಲ್ ಆಗಿದೆ.
ಇತರೆ ಸುದ್ದಿಗಳು