ಕರ್ನಾಟಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮೋದಿ–ಎಚ್.ಡಿ.ಕೆ. ಮಾಸ್ಟರ್ ಪ್ಲಾನ್: ರಾಜಶೇಖರ್ ಜವಳೆ
ಕೇಂದ್ರ ಸರ್ಕಾರವು ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಮಹತ್ವಾಕಾಂಕ್ಷಿ ಮಾಸ್ಟರ್ ಪ್ಲಾನ್‌ನ್ನು ಅಂತಿಮಗೊಳಿಸಿದೆ. ಈ ಪೈಕಿ ಬೀದರ ಜಿಲ್ಲೆಗೂ ಪ್ರಮುಖ ಸ್ಥಾನ ದೊರೆತಿದ್ದು, ಮುಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಮೂಡಿದೆ.
ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಜವಳೆ ಈ ಕುರಿತು ನೀಡಿದ ಹೇಳಿಕೆಯಲ್ಲಿ, ‘‘ಕೈಗಾರಿಕಾ ಕಾರಿಡಾರ್‌ನಿಂದ ಬೀದರ ಜಿಲ್ಲೆ ಹೈಟೆಕ್ ಸಿಟಿಯಾಗಿ ರೂಪುಗೊಳ್ಳುವುದರ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಹೂಡಿಕೆ ಆಕರ್ಷಣೆ ಮತ್ತು ಜನರ ಜೀವನಮಟ್ಟದ ಸುಧಾರಣೆಗೆ ದಾರಿ ತೆರೆಯಲಿದೆ’’ ಎಂದು ಹೇಳಿದ್ದಾರೆ.
ಜವಳೆಯವರ ಪ್ರಕಾರ, ಕೇಂದ್ರ ಸರ್ಕಾರ ಕೈಗೊಂಡಿರುವ ಈ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಹಾಗೂ ಕೇಂದ್ರ ವಾಣಿಜ್ಯ–ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರಮುಖವಾಗಿ ಮುನ್ನಡೆ ನೀಡಿದ್ದಾರೆ. ರಾಜ್ಯದ ಪರವಾಗಿ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೀದರದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಈಗ ಅದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿರುವುದು ಜಿಲ್ಲೆಯ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮುಟ್ಟಿಸಿದೆ’’ ಎಂದು ರಾಜಶೇಖರ್ ಜವಳೆ ಹೇಳಿದ್ದಾರೆ. ಕೈಗಾರಿಕಾ ಕಾರಿಡಾರ್ ಜಾರಿಗೊಂಡರೆ ಕೈಗಾರಿಕೆ, ವ್ಯಾಪಾರ, ಮೂಲಸೌಕರ್ಯ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕರ್ನಾಟಕ ಹೊಸ ದಿಕ್ಕು ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇತರೆ ಸುದ್ದಿಗಳು